ಹಣ ಯಾವಾಗಲೂ ಬಿಗಿಯಾಗಿರುವಂತೆ ಏಕೆ ಅನಿಸುತ್ತದೆ? - ಜಾರ್ ಆಪ್

December 30, 2022
ಹಣ ಯಾವಾಗಲೂ ಬಿಗಿಯಾಗಿರುವಂತೆ ಏಕೆ ಅನಿಸುತ್ತದೆ? - ಜಾರ್ ಆಪ್

ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ ನಿಮ್ಮ ಹಣ ಬಿಗಿಯಾಗಿದೆ ಎಂಬ ನಿರಂತರ ‘ಚಿವುಟಿನ’ ಅನುಭವಕ್ಕೆ ಪರಿಹಾರವನ್ನು ಪಡೆಯಿರಿ.

ನೀವು ಪೇಚೆಕ್ ನಿಂದ ಪೇಚೆಕ್ ವರೆಗೆ ಬದುಕುತ್ತಿದ್ದರೆ, ನಿಮ್ಮ ಹಣ ಖಾಲಿಯಾಗುವುದು ಎಂಬ ಚಿಂತೆ ನಿಮಗಿರುತ್ತದೆ.

ಕೆಲವು ಆರ್ಥಿಕ ಪರಿಸ್ಥಿತಿಗಳಲ್ಲಿ ನೀವು ಅಸಹಾಯಕರೆಂದು ನಿಮಗೆ ಅನಿಸಿದ್ದರೆ ನಿಮ್ಮ ಹೊಟ್ಟೆಯಲ್ಲಿ ನೀವು ಈ ಚಿವುಟನ್ನು ಅನುಭವಿಸಿರಬಹುದು.

ಚಿಂತಿಸುವ ಅಗತ್ಯವಿಲ್ಲ, ಇದು ಸಹಜವೇ. ಶ್ರೀಮಂತರು ಕೂಡಾ ಅವರು ತಮ್ಮ ಜೀವನಶೈಲಿಯನ್ನು ಉತ್ತಮಗೊಳಿಸಿದರೆ ಇದು ಅವರ ಭವಿಷ್ಯದಲ್ಲಿ ಪರಿಣಾಮ ಬೀರುವುದು ಎಂದು ನಂಬುತ್ತಾರೆ.

ಆದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಗಿದ್ದರೂ ನಿಮಗೆ ನಿರಂತರ ದಿವಾಳೀತನದ ಅನುಭವವಾಗುತ್ತದೆಯೇ? ಈ ‘ಚಿವುಟು’ ಹೋಗುವುದೇ ಇಲ್ಲವೇ? ನಿಮ್ಮ ಬಳಿ ಸಾಕಷ್ಟು ಇಲ್ಲ ಎಂದೆನಿಸುತ್ತದೆಯೇ?

ಪರಿಸ್ಥಿತಿ ಹೀಗಿದ್ದರೆ, ದುರಾದೃಷ್ಟವೆಂಬಂತೆ, ನೀವು ಈ ಒತ್ತಡದಿಂದ ಮುಕ್ತರಾಗಲಾರಿರಿ. ಇದು ಮನುಷ್ಯ ಸ್ವಭಾವವಾಗಿದೆ.

ಹಣ ಖರ್ಚುಮಾಡುವ ಭೀತಿಗೆ, ಎಲ್ಲರಿಗೂ- ಸರಿಹೊಂದುವ- ಒಂದು- ಗಾತ್ರ, ಎಂಬ ಪರಿಹಾರವಿಲ್ಲ. ಆದರೆ ಸಮಯದೊಂದಿಗೆ ನೀವು ಇದರ ಹೊಡೆತವನ್ನು ಕಡಿಮೆ ಮಾಡಬಹುದು. ಅತೀ ಶ್ರೀಮಂತರ ಈ 8 ಆರ್ಥಿಕ ಸಲಹೆಗಳು ಹಣದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಬದಲಿಸಲು ನಿಮಗೆ ಸಹಾಯ ಮಾಡಬಹುದು.

ಮೊದಲಿಗೆ, ಹಣವಿದ್ದರೂ ಹಣ ಬಿಗಿಯಾಗಿದೆ ಎಂಬ ಈ ತರ್ಕಬದ್ಧವಲ್ಲದ ಭೀತಿಯನ್ನು ಅರ್ಥಮಾಡಿಕೊಳ್ಳೋಣ. ಈ ಭಾವನೆಯಿಂದ ಬಳಲುವ ವ್ಯಕ್ತಿಗಳಿಗೆ ಅವರು ಅವರ ಹಣಕಾಸನ್ನು ಕೆಟ್ಟದಾಗಿ ನಿರ್ವಹಿಸಬಹುದು ಎಂಬ ಚಿಂತೆಯಿರುತ್ತದೆ.

ಒಂದು ಹಳಸಲು ನುಡಿಯಂತೆಯೇ, ಅವರು, ಹಣವು ಅವರನ್ನು ದುಷ್ಟರನ್ನಾಗಿ ಮಾಡಬಹುದೆಂದೂ ಅವರು ನಂಬಬಹುದು. ಒತ್ತಡ ಹಾಗೂ ಆತಂಕ ನಿಮ್ಮೊಳಗೆ ಮನೆಮಾಡಿ ನಿಮ್ಮ ಆರೋಗ್ಯ, ನಿದ್ರೆ ಹಾಗೂ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು.

ನೀವು ಚೆನ್ನಾಗಿಯೇ ಸಂಪಾದನೆ ಮಾಡುತ್ತೀರಿ ಹಾಗೂ ಹೆಚ್ಚುವರಿ ಖರ್ಚುಗಳನ್ನೂ ಮಾಡುವುದಿಲ್ಲ ಎಂದುಕೊಳ್ಳುತ್ತೀರಿ, ಆದರೆ ತಿಂಗಳ ಕೊನೆಯಲ್ಲಿ ನಿಮ್ಮಲ್ಲಿ ಏನೂ ಉಳಿದಿರುವುದಿಲ್ಲ. ಒಂದೆ ಕೊರತೆ ಇದ್ದಂತೆ ಅನಿಸುತ್ತದೆ.

ಹಾಗಾದರೆ, ಏನು ವಿಷಯ? ನಿಮ್ಮ ಬಳಿ ಬೇಕಾದಷ್ಟು ಹಣ ಇದ್ದರೂ ನೀವು ಬಯಸಿದ ಹಾಗೆ ನಿಮ್ಮ ಹಣಕಾಸು ವ್ಯವಸ್ಥಿತವಾಗಿಲ್ಲವೇಕೆ?

ಇದರ ಹಿಂದಿನ ಸಂಭಾವ್ಯ ಕಾರಣಗಳನ್ನು ಅನ್ವೇಷಿಸೋಣ:

1. ನೀವು ಹೆಚ್ಚಿನ ಗಮನವನ್ನು ಹರಿಸುತ್ತಿಲ್ಲ

ಹಲವಾರು ಖರ್ಚಿನ ಸಮಸ್ಯೆಗಳು ಸಣ್ಣದಾಗಿ ಆರಂಭವಾಗುತ್ತವೆ ಆದರೆ ನಾವು ಅದರ ಮೇಲೆ ಗಮನ ಹರಿಸದ ಕಾರಣ ಅವುಗಳು ವರ್ಷ ಕಳೆದಂತೆ ಬೆಳೆಯುತ್ತಾ ಹೋಗುತ್ತವೆ.

ನಮ್ಮ ಬಳಿ ಹೆಚ್ಚು ಹಣವಿದ್ದಾಗ, ನಾವು ಬಜೆಟ್ ಮಾಡುವ ಅಥವಾ ನಮ್ಮ ಖರೀದಿಗಳ ಬಗ್ಗೆ ಜಾಣ್ಮೆಯಿಂದ ಯೋಚಿಸುವ ಸಂಭಾವನೆ ಕಡಿಮೆ ಇರುತ್ತದೆ. ಸಮಸ್ಯೆ ಆರಂಭವಾಗುವುದು ಇಲ್ಲಿಂದಲೇ.

ಆ ಸಮಯದಲ್ಲಿ ಆ ಖರೀದಿಗಳು ನಮಗೆ ಯಾವುದೇ ನೋವುಂಟು ಮಾಡುವುದಿಲ್ಲ ಎಂಬ ಮಾತ್ರಕ್ಕೆ, ಯಾವಾತ್ತಾದರೂ ಒಂದು ದಿನ ಅವು ನಮ್ಮ ಬೆನ್ನು ಹತ್ತುವುದಿಲ್ಲ ಎಂದಲ್ಲ.

ತಿಂಗಳ ಕೊನೆಯಲ್ಲಿ ಯಾವುದೇ ಹಣ ಉಳಿಯದೇ ಇರಲು ಕಾರಣ ಇಂದಿನ ಉದ್ವೇಗದ ಖರೀದಿಗಳು. ಗಮನವಿಡಿ ಹಾಗೂ ನಿಮ್ಮನ್ನು ನೀವೇ ಪ್ರಶ್ನಿಸಿ, ನನಗೆ ಇದರ ಅಗತ್ಯವಿದೆಯೇ?

2. ನೀವು ನಿಮ್ಮ ಬೇಕು ಗಳನ್ನು ಅಗತ್ಯಗಳು ಎಂದುಕೊಳ್ಳುತ್ತೀರಿ

ಒಂದು ಪರಿಣಾಮಕಾರಿ ಬಜೆಟ್ ಎಷ್ಟು ಮುಖ್ಯ ಎಂದು ನಿಮಗೆ ಈಗಾಗಲೇ ತಿಳಿದಿದೆ, ನಿಮ್ಮ ಬೇಕುಗಳು ಹಾಗೂ ಅಗತ್ಯಗಳ ಮಧ್ಯೆ ವ್ಯತ್ಯಾಸವನ್ನು ತಿಳಿಯಲು. ಆದರೆ ನಾವು ಕೆಲವು ನಿರ್ದಿಷ್ಟ ಬೇಕುಗಳಿಗೆ ಅಥವಾ ಹಂಬಲಗಳಿಗೆ ಕಟ್ಟುಬಿದ್ದಾಗ, ಅವುಗಳು ಅಗತ್ಯಗಳ ಹಾಗೆ ಕಾಣಲು ಆರಂಭಿಸುತ್ತವೆ. 

3. ನೀವು ಖರೀದಿಸುವ ವಸ್ತುಗಳನ್ನು ಭರಿಸಲು ನಿಮ್ಮಿಂದ ಆಗುವುದಿಲ್ಲ

ನೀವು ಸರಾಸರಿಗಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದರೆ ಆರ್ಥಿಕ ಅಳತೆಯ ನಿಮ್ಮ ದೃಷ್ಟಿಕೋನವು ಹಾದಿ ತಪ್ಪಬಹುದು. ಆರ್ಥಿಕ ಭದ್ರತೆ ಹೊಂದಿರುವುದರಿಂದ ಆಗುವ ನಷ್ಟ ಬಹುಶಃ ಇದು ಒಂದೇ ಆಗಿರಬಹುದು.

ನೀವು ಎಲ್ಲಾ ನವೀನತೆಗಳಿರುವ ಹೊಚ್ಚ ಹೊಸ ಕಾರು ಅಥವಾ ಬೈಕ್ ಅಥವಾ ಡಿಸೈನರ್ ಬ್ಯಾಗ್ ಅಥವಾ ಉಡುಪನ್ನು  ಖರೀದಿಸುವ ಮುನ್ನ ಎರಡು ಬಾರಿ ಯೋಚಿಸುದಿಲ್ಲ ಏಕೆಂದರೆ ಇದು ನಿಮ್ಮ ಕೈಗೆಟಕುತ್ತದೆ ಎಂದು ನೀವು ನಂಬುತ್ತೀರಿ.

ನೀವು ಇದು ನನ್ನ ಕೈಗೆಟಕುವಂತದ್ದು ಎಂದು ಯೋಚಿಸಿದರೆ ನಿಮಗಾಗಿ ನೀವು ಮಾಡದೇ ಇರುವಂತಹ ಸಾಕಷ್ಟು ವಿಷಯಗಳಿರುತ್ತವೆ. ಆದರೆ, ಹಣವಿದ್ದ ಮಾತ್ರಕ್ಕೆ ನೀವು ಹೆಚ್ಚುವರಿ ಖರ್ಚು ಮಾಡಬೇಕೆಂದಿಲ್ಲ.

ಸ್ವಲ್ಪ ಸಮಯದ ನಂತರ, ನೀವು ಈ ಅನುಕೂಲಗಳ ಮೇಲೆ ಹೆಚ್ಚಾಗಿಯೇ ಅವಲಂಬಿತರಾಗಿರುತ್ತೀರಿ, ಹಾಗೂ ಇದು ಆರ್ಥಿಕವಾಗಿ ಹೊರೆ ಎನಿಸಬಹುದು, ಇದನ್ನು ಭರಿಸುವ ಶಕ್ತಿ ನಿಮ್ಮಲ್ಲಿದ್ದರೂ ಸಹ.

ಇಲ್ಲಿ ಉಪಾಯವೇನೆಂದರೆ ವಿಶಾಲ ಚಿತ್ರವನ್ನು ನೋಡುವ ಸಾಮರ್ಥ್ಯ. ಒದು ಅಗ್ರ ಶ್ರೇಣಿಯ ಕಾರು ನಿಮ್ಮ ಕೈಗೆಟುಕುವಂತಿದ್ದರೂ, ಆ ಹಣದ ಒಂದು ಭಾಗವನ್ನು ಬೇರೆ ಎಲ್ಲಿಯಾದರೂ ಬಳಸಬಹುದೇ?

ನಿಮ್ಮ ಆರ್ಥಿಕ ಆದ್ಯತೆಗಳೇನು ಎಂದು ತಿಳಿಯಿರಿ, ಹಾಗೂ ನೀವು ಉಳಿಸಬೇಕಾಗಿರುವ ಹಣವನ್ನು ಖರ್ಚು ಮಾಡಿದಾಗ ಇದನ್ನು ಒಂದು ಮಾರ್ಗದರ್ಶಿಯಾಗಿ ಬಳಸಿರಿ.

4. ನಿಮಗೆ ನಿಜವಾಗಿ ಏನು ಬೇಕೆಂದು ನಿಮಗೆ ತಿಳಿದಿಲ್ಲ

ಹೆಚ್ಚಿನ ಆಥಿಕ ಸಮಸ್ಯೆಗಳು ಇಲ್ಲಿಗೇ ಬಂದು ನಿಲ್ಲಿತ್ತವೆ : “ನಾನು ಇಲ್ಲಿದ್ದೇನೆ, ಆದರೆ ನಾನು ಅಲ್ಲಿರಬೇಕು ಎಂದು ನನಗನಿಸುತ್ತದೆ.” ಎಷ್ಟೇ ಆದರೂ, ಈಗ ಇರುವ ಪರಿಸ್ಥಿತಿ ಚೆನ್ನಾಗಿಯೇ ಇದೆ ಎಂದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ, ಅಲ್ಲವೇ?

ಆದರೆ ಈ “ಅಲ್ಲಿ” ಹೇಗಿರುತ್ತದೆ ಎಂಬ ಅರಿವೇ ನಿಮಗಿಲ್ಲದಿದ್ದರೆ? ಈ “ಇಲ್ಲಿ” ಸಂಭವವಿಲ್ಲ ಎಂದು ನಿಮಗೆ ತಿಳಿದಿದ್ದರೆ? ಸರಿ, ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ.

ನಿಮ್ಮ ಬಳಿ ಒಂದು ಯೋಜನೆಯಿಲ್ಲದಿದ್ದರೆ ಸಕಾರಾತ್ಮಕ ಬದಲಾವಣೆಗಳನ್ನು ಮಾಡುವುದೂ ಅತ್ಯಂತ ಕಷ್ಟಕರವಾಗಿರುತ್ತದೆ, ಹಾಗೂ ನಿಮ್ಮ ಬಳಿ ಒಂದು ಗುರಿ ಇಲ್ಲದಿದ್ದರೆ ಒಂದು ಸಾಧಾರಣ ತಂತ್ರವನ್ನು ರೂಪಿಸುವುದೂ ಇನ್ನೂ ಕಷ್ಟಕರವಾಗಿರುತ್ತದೆ.

ನಿಮಗೆ ಸಿಕ್ಕಿಹಾಕಿಕೊಂಡಿರುವ ಹಾಗೆ ಅನಿಸಿದರೆ, ಈ ಸಮಸ್ಯೆಯ ಒಂದು ಅಂಶವು, ನಿಮಗೇನು ಬೇಕೆಂದು ನಿಮಗೆ ತಿಳಿಯದೇ ಇರುವ ಕಾರಣದಿಂದಲೂ ಅಗಿರುವ ಸಾಧ್ಯತೆ ಇದೆ.

ಹಾಗಾದರೆ ಈ ಪರಿಸ್ಥಿತಿಯನ್ನು ಸರಿಪಡಿಸಲು ನೀವು ಏನು ಮಾಡಬಹುದು?

1.ಆರ್ಥಿಕ ಯೋಜನೆಯನ್ನು ರೂಪಿಸಿ

ಹೆಚ್ಚುವರಿ ಖರ್ಚು ಅಥವಾ ಅದರ ಯೋಚನೆಯನ್ನು ತಪ್ಪಿಸಲು ಒಂದು ಮಾಸಿಕ ಬಜೆಟ್ ಅನ್ನು ತಯಾರಿಸಿ ಅದನ್ನು ಪಾಲಿಸಿರಿ.

ಒಂದು ಬಜೆಟ್ ನಿಮ್ಮ ಜೀವನದ ಅಗತ್ಯಗಳಿಂದ ನಿಮ್ಮನ್ನು ವಂಚಿಸದೆ ನಿಮ್ಮ ಖರ್ಚುಗಳನ್ನು ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಮಗೆ ಉಚಿತ ಬಜೆಟ್ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯ ಮಾಡಲು  ಆನ್ಲೈನ್ ಆಪ್ ಹಾಗೂ ಸಾಧನಗಳ ಒಂದು ದಂಡೇ ಇದೆ.

ನಿಮ್ಮ ಬಜೆಟ್ ನಲ್ಲಿ, ನಿಮ್ಮ ಎಲ್ಲಾ ಖಾತೆಗಳಿಂದ ಹೊರಹೋಗುವ ಹಾಗೂ ಒಳಬರುವ ಹಣಕಾಸಿನ ವಹಿವಾಟಿನ ಮಾಹಿತಿ ಇರಬೇಕು.

ನಿಮ್ಮ ಖರ್ಚುಗಳನ್ನು ವರ್ಗೀಕರಿಸಲು ಸಹಾಯ ಮಾಡುವ ಹಲವು ಸಾಧನಗಳು ಹಾಗೂ ಸಾಫ್ಟ್ವೇರ್ ಗಳಿವೆ ಹಾಗೂ ಇವು ನೀವು ಯಾವಾಗ ಖರ್ಚು ಕಡಿಮೆ ಮಾಡಬೇಕು ಎಂದು ನಿರ್ಧರಿಸಲೂ ಸಹಾಯ ಮಾಡುತ್ತವೆ.

ಒಂದು ಬಜೆಟಿಂಗ್ ಯೋಜನೆಯಿಲ್ಲದಿದ್ದರೆ ನಿಮ್ಮ ಹಣ ಎಲ್ಲಿ ಹೋಗುತ್ತಿದೆ ಹಾಗೂ ಅದನ್ನು ಹಿಂಪಡೆಯುವುದು ಹೇಗೆ ಎಂದು ತಿಳಿಯುವುದು ಕಷ್ಟವಾಗುತ್ತದೆ.

2. ಒಂದು ತುರ್ತು ನಿಧಿಯನ್ನು ತಯಾರಿಸಿ

ಒಂದು ತುರ್ತು ನಿಧಿಯು ನಿಮಗೆ ದೊಡ್ಡದಾದ ಅನಿರೀಕ್ಷಿತ ಬಿಲ್ಲು ಗಳು ಬಂದ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ತುರ್ತು ನಿಧಿಯಲ್ಲಿ ಮುಂದಿನ ಆರು ತಿಂಗಳು ನಿಮ್ಮನ್ನು ನಿಭಾಯಿಸಲು ಆಗುವಷ್ಟು ಹಣವಿರಬೇಕು.

ಅಪಘಾತಗಳು, ತಡವಾದ ಪಾವತಿಗಳು ಅಥವಾ ಕಾರಿನ ಕುಸಿತ, ನಿಮಗೆ ತುರ್ತು ಹಣ ಯಾವಾಗ ಬೇಕಾಗುವುದು ಎಂದು ತಿಳಿದಿರುವುದಿಲ್ಲ. ಅನಿರೀಕ್ಷಿತ ಹೊಡೆತಗಳಿಗೆ ಯಾವಾಗಲೂ ಸಿದ್ಧವಾಗಿರಿ.

ನಿಮ್ಮ ಅಗತ್ಯದ ಹಾಗೂ ತೆರಿಗೆ ಖರ್ಚುಗಳು ಕಳೆದ ಮೇಲೆ ಎಲ್ಲಾ ಹೆಚ್ಚುವರಿ ಹಣವನ್ನು ತುರ್ತು ನಿಧಿಗಾಗಿ ತೆರೆದಿರುವ ಪ್ರತ್ಯೇಕ ಖಾತೆಯಲ್ಲಿ ಹಾಕಿ. ಇದು ತುರ್ತು ಪರಿಸ್ಥಿತಿಗಳಲ್ಲಿ ನಗದಿನ ನಿರಂತರ ಹರಿವನ್ನು ಖಚಿತಪಡಿಸುತ್ತದೆ.

ನಿಮ್ಮ ಮುಖ್ಯ ಖಾತೆಯನ್ನು ನಿರ್ವಹಿಸಲು ನೀವು ನಿಮ್ಮ ವಾಸ್ತವಿಕ ಆದಾಯ ಹಾಗೂ ಕನಿಷ್ಠ ಅಗತ್ಯದ ವ್ಯತ್ಯಾಸವನ್ನು ವರ್ಗಾಯಿಸಬಹುದು. ಹಣ ಹೆಚ್ಚಿರುವ ತಿಂಗಳುಗಳಲ್ಲಿ ಸಮತೋಲನವನ್ನು ಕಾಪಾಡಿ.

ಇದು ನಿಮಗೆ ನೆಮ್ಮದಿಯನ್ನು ನೀಡುತ್ತದೆ ಹಾಗೂ ನೀವು ನಿಮ್ಮ ಪೇ ಚೆಕ್ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವುದಿಲ್ಲ.

3.ಬಿಲ್ ಪಾವತಿಗಳಿಗೆ ಆಟೋ ಪೇ ಯ ವ್ಯವಸ್ಥೆ ಮಾಡಿ

ಹೆಚ್ಚಿನವರು ಅವರ ಬಿಲ್ ಗಳ ಬಗ್ಗೆ ಚಿಂತಿಸುತ್ತಾರೆ. ನೀವು ನಿಮ್ಮ ಎಲ್ಲಾ ಬಿಲ್ಲುಗಳನ್ನು ಆಟೋ ಪೇ ಗೆ ಸೆಟ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಮಾಡುವುದನ್ನು ಅಥವಾ ನಿಮ್ಮ ಹಣವನ್ನು ಮುಟ್ಟುವುದನ್ನು ನೀವು ತಪ್ಪಿಸಬಹುದು.

ನೀವು ನಿಮ್ಮ ಬಿಲ್ಲುಗಳನ್ನು ಸ್ವಯಂಚಾಲಿತವಾಗಿಯೇ ಪಾವತಿಸಿದರೆ ನಿಮಗೆ ಹಣ ಖರ್ಚು ಮಾಡಲು ಭಯವುರುವುದಿಲ್ಲ. ನಿಮಗೆ ಸಾಲವಿದ್ದರೆ, ಆಟೋ ಪೇ ಆದರ್ಶವಾಗಿರುತ್ತದೆ ಏಕೆಂದರೆ ಹಚ್ಚಿನ ಸಾಲಗಳಲ್ಲಿ ಸ್ಥಿರ ಮಾಸಿಕ ಪಾವತಿ ಇರುತ್ತದೆ.

ನಿಮ್ಮ ಉಪಸ್ಥಿತಿಯಿಲ್ಲದೆಯೇ ಸ್ವಯಂಚಾಲಿತವಾಗಿ ಬಿಲ್ ಪಾವತಿಗಳನ್ನು ಮಾಡುವುದರಿಂದ, ನೀವು ನಿಯಂತ್ರಿಸಬಹುದಾದ ವಿಷಯಗಳ ಮೇಲೆ, ಅಂದರೆ ಬಜೆಟ್ ಹಾಗೂ ಉಳಿತಾಯ ಮಾಡುವುದು, ಗಮನವಿರಿಸಲು ನಿಮ್ಮ ಮನಸ್ಸನ್ನು ಮುಕ್ತವಾಗಿಡಬಹುದು. 

ಹೆಚ್ಚಿನ ಉದ್ಯಮಗಳು ನಿಮ್ಮ ಬಿಲ್ ಪಾವತಿಗೆ ಸಿದ್ಧವಿರುವಾಗ ಅಥವಾ ಪಾವತಿ ದೊರೆತಾಗ ಈ-ಮೇಲ್ ಸೂಚನೆಗಳನ್ನು ಕಳಿಸುತ್ತವೆ, ಇದರಿಂದ ನಿಮಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವ ಅಗತ್ಯವಿರುವುದಿಲ್ಲ.

4. ನಿಮಗೆ ಸಾಲ ಬೇಕಾಗಿರುವಾಗ ಸಾಲದ ವಿಧಗಳನ್ನು ಪರಿಶೀಲಿಸಿ

ಸಾಲದಿಂದ ದೂರವಿರಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ, ಆದರೆ ಕೆಲವು ಅಗತ್ಯ ಪರಿಸ್ಥಿತಿಗಳಲ್ಲಿ ಇದು ಬೇಕಾಗುತ್ತದೆ, ಉದಾಹರಣೆಗೆ ಮನೆ ಖರೀದಿಸುವಾಗ.

 ಮನೆ ಖರೀದಿಸುವಾಗ, ಕಾಲೇಜ್ ದಾಖಲಾತಿ, ಉದ್ಯಮ ಆರಂಭಿಸುವಾಗ ಸಾಲವು ಸಹಾಯಕವಾಗುತ್ತದೆ.

ಸಾಲ ತೆಗೆದುಕೊಳ್ಳುವ ಮುನ್ನ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ. ನಿಮಗೊಂದು ಉತ್ತಮ ಸಾಲದ ಕೊಡುಗೆ ಸಿಕ್ಕಿದರೆ, ಇದನ್ನು ನಿರ್ವಹಿಸುವುದು ಸರಳವಾಗುತ್ತದೆ ಏಕೆಂದರೆ ಇಲ್ಲಿ ಅಗತ್ಯಕ್ಕಿಂತ ಹೆಚ್ಚು ಬಡ್ಡಿ ತೆರುವ ಅಗತ್ಯವಿರುವುದಿಲ್ಲ.

ಒಮ್ಮೆ ನೀವು ಸಾಲವನ್ನು ಪಡೆದ ಮೇಲೆ, ಆ ಸಾಲವನ್ನು ಮರುಪಾವತಿಸುವ ತಂತ್ರವನ್ನು ನೀವು ರೂಪಿಸಬೇಕಾಗುತ್ತದೆ. ನಿಮ್ಮ ಬಳಿ ಒಂದು ಒಳ್ಳೆಯ ಯೋಜಿತ ತಂತ್ರವಿದ್ದರೆ ನೀವು ನಿಮ್ಮ ಸಾಲವನ್ನು ಆದಷ್ಟು ಬೇಗ ಪಾವತಿಸಬಹುದು.

ನಿಮ್ಮ ಸಾಲದ ಬಾಧ್ಯತೆ ನಿಮ್ಮ ಹೆಚ್ಚಿನ ಆದಾಯವನ್ನು ಬಳಸುತ್ತಿದ್ದರೆ, ನೀವು ಸಾಲವನ್ನು ಪಾವತಿಸುವ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗುತ್ತದೆ.

5. ದೀರ್ಘ ಕಾಲದ ಆರ್ಥಿಕ ಗುರಿಗಳನ್ನು ಸ್ಥಾಪಿಸಿ

ಗುರಿಯನ್ನು ಸ್ಥಾಪಿಸುವುದು ಬಜೆಟ್ ಮಾಡುವುದಕ್ಕೆ ಸಮಾನವಾಗಿರುತ್ತದೆ. ಇದು ನೀವು ಹೆಚ್ಚು ಖರ್ಚು ಮಾಡದಂತೆ ತಡೆದು ನಿಮ್ಮ ಹಣ ಹಾಗೂ ಉಳಿತಾಯಗಳಿಗೊಂದು ಉದ್ದೇಶವನ್ನು ನೀಡುತ್ತದೆ.

ಒಂದು ಯೋಜನೆಯನ್ನು ಹೊಂದಿರುವುದು ನಮ್ಮ ಆತಂಕವನ್ನು ಕಡಿಮೆ ಮಾಡಿ ಮುಖ್ಯ ವಿಷಯಗಳ ಮೇಲೆ ಗಮನವಿರಿಸಲು ಸಹಾಯ ಮಾಡುತ್ತದೆ. ನಿಮ್ಮ ಆರ್ಥಿಕ ಗುರಿಯು ನಿಮಗೆ ಸಾಲಗಳನ್ನು ಪಾವತಿಸುವ ಹಾಗೂ ಉಳಿತಾಯಗಳನ್ನು ಉತ್ತಮಗೊಳಿಸುವ ಉಪಾಯವನ್ನು ತಿಳಿಸಬೇಕು.

ಯೋಜನೆ ರೂಪಿಸುವಾಗ, ನಿಮ್ಮ ಭವಿಷ್ಯ ನಿಮ್ಮ ಪ್ರಕಾರ ಹೇಗಿರಬೇಕು ಎಂದು ಚಿತ್ರಿಸಿ ಆ ಗುರಿಗಳನ್ನು ತಲುಪಲು ಮಾಡಬೇಕಾದ ಕಾರ್ಯಗಳನ್ನು ಆರಂಭಿಸಿ.

ಒಂದು ಆದರ್ಶ ಖರ್ಚಿನ ಯೋಜನೆಯನ್ನು ರೂಪಿಸಲು, ನಿಮಗಿರುವ ಒಂದು ವಯಕ್ತಿಕ ಉಳಿತಾಯದ ಗುರಿಯ ಬಗ್ಗೆ ಯೋಚಿಸಿ, ನಿಮ್ಮ ನಿವೃತ್ತಿ ಹಾಗೂ ನಿಮ್ಮ ಆದಾಯ.

 

6. ಕೃತಜ್ಞರಾಗಿರಿ

ಕೊನೆಯ ಆದರೆ ಕನಿಷ್ಟವಲ್ಲದ ಅಂಶವೇನೆಂದರೆ, ಯಾವಾಗಲೂ ಕೃತಜ್ಞರಾಗಿರಿ. ನೀವು ನಿಮ್ಮ ಜೀವನದಲ್ಲಿ ಆಗುವ ಒಳ್ಳೆಯದನ್ನು ಪರಿಗಣಿಸದೆ ಸೋಲುಗಳ ಮೇಲೆ ಮಾತ್ರ ಗಮನಹರಿಸಿ ಕೃತಜ್ಞರಾಗಿರದಿದ್ದರೆ ಅದು ಮಾರ್ಗದ ಅಂತ್ಯ ಎಂದು ಹೇಳಬಹುದು.

ಆದರೆ ಇದನ್ನು ಅರಿತುಕೊಳ್ಳಿ : ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸುವ ಶಕ್ತಿ ನಿಮಗಿದೆ. ಅದು ಸರಳವಾಗದೇ ಇದ್ದರೂ ಸಾಧ್ಯವಾಗಿರುತ್ತದೆ.

ನಿಮ್ಮಿಂದ ಕಡಿಮೆ ತಿಳುವಳಿಕೆಯ ಜನರೂ ತಮ್ಮ ಆರ್ಥಿಕತೆಯನ್ನು ನಿರ್ವಹಿಸಿದ್ದಾರೆ.

ಹಾಗೂ, ನಿಮ್ಮ ಹಣಕಾಸು ಅಸ್ತವ್ಯಸ್ತವಾಗಿದ್ದರೆ, ನೀವು ಇತರರಿಗಿಂತ ಹೆಚ್ಚು ಅನುಕೂಲಕರವಾದ ಸಂತೋಷದ ಜೀವನ ನಡೆಸುತ್ತಿದ್ದೀರಿ ಎಂದು ಅರ್ಥ. ಆದ್ದರಿಂದ ನಿಮ್ಮ ಬಳಿ ಏನಿದೆಯೋ ಅವುಗಳಿಗಾಗಿ ಸದಾ ಕೃತಜ್ಞರಾಗಿರಿ.

ನೀವು ಕೂಲಿ ಕಾರ್ಮಿಕರಾಗಿರಿ ಅಥವಾ ಆರು ಅಂಕಿಗಳ ಆದಾಯ ಪಡೆಯುವ CEO ನೇ ಆಗಿರಿ, ಹಣ ಬಿಗಿಯಾಗಿರುವ ಈ ಭಾವನೆಯು ಯಾವಾಗ ಬೇಕಾದರೂ ನುಸುಳಬಹುದು.

ಇದು ತಮ್ಮ ಬಳಿ ಹೆಚ್ಚು ಹಣವಿಲ್ಲ ಎಂದು ನಂಬಿರುವ ಕಡಿಮೆ ಆದಾಯದ ಅಥವಾ ಮಧ್ಯಮ ವರ್ಗದ ಜನರಲ್ಲಿ ಸಾಮಾನ್ಯವಾಗಿದ್ದರೂ, ಎಲ್ಲರಿಗೂ ಹೀಗೆನಿಸುತ್ತದೆ.

ನಿಮ್ಮ ಭಯ ದುರ್ಬಲ ಆರ್ಥಿಕ ಭವಿಷ್ಯದ ಕಾರಣದಿಂದ ಹುಟ್ಟಿದ್ದರೆ, ನೀವು ನಿಮ್ಮ ಹಣವನ್ನು ವ್ಯವಸ್ಥಿತವಾಗಿರಿಸಿ ಹಾಗೂ ತಂತ್ರವನ್ನು ರೂಪಿಸಿ ಪರಿಸ್ಥಿತಿಯನ್ನು ಬದಲಾಯಿಸಬಹುದು. ನಿಮ್ಮ ಹಣವನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವ ಜೊತೆಗೆ ಜಾರ್ ಆಪ್ ನಿಮಗೆ ಹಣ ಉಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಅತೀತದ ಅಹಿತಕರ ಘಟನೆಗಳಿಂದಾಗಿ ನಿಮ್ಮ ಹಣದ ಭೀತಿ ಹುಟ್ಟಿದ್ದರೆ, ನಿಮ್ಮ ಹಣ ಖರ್ಚು ಮಾಡುವ ಭೀತಿಯ ಜೊತೆ ಮುಂದೆ ಸಾಗುವ ಮೊದಲು ನೀವು ಆ ಆಘಾತಗಳನ್ನು ಗುರುತಿಸಬೇಕಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಖಂಡಿತವಾಗಿಯೂ ಇರುತ್ತದೆ.

Subscribe to our newsletter
Thank you! Your submission has been received!
Oops! Something went wrong while submitting the form.